ಮೂಡಿಗೆರೆ, 28
ನವೆಂಬರ್ 2ರಂದು ನಡೆಯುವ ಟಿಎಪಿಸಿಎಂಎಸ್ ಚುನಾವಣೆಯಲ್ಲಿ 8ಮಂದಿ ಎನ್ಡಿಎ ಬೆಂಬಲಿತ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದು, ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಗಜೇಂದ್ರ ಕೊಟ್ಟಿಗೆಹಾರ ಹೇಳಿದರು

ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಟಿಎಪಿಸಿಎಂಎಸ್ನಿoದ ಕಳೆದ ಬಾರಿ ರೈತಭವನದಲ್ಲಿ ವರನ ಕೊಠಡಿ, ಶೌಚಾಲಯ, ಮಂಟಪ, ಫಾಲ್ ಸೀಲಿಂಗ್, ಅಡುಗೆ ಮನೆಗೆ ಕಾಂಕ್ರೀಟ್, ಗೋಡಗೆ ಟೈಲ್ಸ್, ಗುಣಮಟ್ಟದ ಅಡುಗೆ ಪಾತ್ರೆಗಳು, ವಿದ್ಯುತ್ ವೈರಿಂಗ್ ನವೀಕರಣ, ಸಂಸ್ಥೆ ಕಚೇರಿ ಹಿಂಭಾಗ ಹಾಗೂ ರೈತಭವನದ ಬಲಭಾಗ ರೆಡಿಮೆಡ್ ಕಾಂಪೌಡ್, ರೈತರ ಮಕ್ಕಳಿಗೆ ಅರ್ಹತೆ ಆಧಾರದಲ್ಲಿ ಉದ್ಯೋಗ ಒದಗಿಸಲಾಗಿದೆ. ಮುಂದಿನ ದಿನದಲ್ಲಿ ಎಂ.ಜಿ.ರಸ್ತೆಯಲ್ಲಿರುವ ಹಳೆ ಕಟ್ಟಡ ಕೆಡವಿ ೪ ಅಂತಸ್ತಿನ ಕಟ್ಟಡ ನಿರ್ಮಾಣ, ಮುಂಭಾಗದಲ್ಲಿರುವ ವಾಣಿಜ್ಯ ಮಳಿಗೆ ಮೇಲಂತಸ್ತಿನಲ್ಲಿ ಮಳಿಗೆ ಹಾಗೂ ಮಿನಿ ಹಾಲ್ ನಿರ್ಮಾಣ, ರೈತಭವನ ಮುಖ್ಯ ಧ್ವಾರಕ್ಕೆ ಕಮಾನು, ಪೆಟ್ರೋಲ್ ಬಂಕ್, ನಂದಿನಿ ಹಾಲಿನ ಡೈರಿ ಸೇರಿದಂತೆ ಅನೇಕ ಯೋಜನೆ ರೂಪಿಸಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಬಾಳೂರು ಲಕ್ಷ್ಮಣಗೌಡ ಮಾತನಾಡಿ, ಈಗಾಗಲೇ ಮೂಡಿಗೆರೆ ಹಾಗೂ ಕಳಸ ತಾಲೂಕು ವ್ಯಾಪ್ತಿಯ 14 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿAದ ಟಿಎಪಿಸಿಎಂಎಸ್ಗೆ ಎ.ಶ್ರೇಣಿ ನಿರ್ದೇಶಕರಾಗಿ ಆಯ್ಕೆಯಾಗಿರುವ ಪ್ರಸನ್ನ ಗೌತಳ್ಳಿ, ಎಂ.ಎಲ್.ಕಲ್ಲೇಶ್, ವಿ.ಕೆ.ಶಿವೇಗೌಡ, ಟಿ.ಎಂ.ಗಜೇದ್ರ, ಪ್ರಸನ್ನ ಮುಗ್ರಹಳ್ಳಿ ಆಯ್ಕೆಯಾಗಿದ್ದಾರೆ. ಇವರ ಜತೆಗೆ ಕಣದಲ್ಲಿರುವ 8 ಅಭ್ಯರ್ಥಿಗಳ ಗೆಲುವು ಕೂಡ ನಿಶ್ಚಿತವಾಗಿರುವುದರಿಂದ ಅಧಿಕಾರ ಹಿಡಿಯುವುದರಲ್ಲಿ ಸಂಶಯವಿಲ್ಲ. ಸಂಸ್ಥೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಮತದಾರರು ಎನ್ಡಿಎ ಅಭ್ಯರ್ಥಿಗಳನ್ನು ಬೆಂಬಲಿಸಬೇಕೆoದು ಮನವಿ ಮಾಡಿದರು.
ಬಿಜೆಪಿ ಹಿರಿಯ ಮುಖಂಡ ಎಂ.ಆರ್.ಜಗದೀಶ್, ಮುಖಂಡರಾದ ರಘು ಜನ್ನಾಪುರ, ವಿನಯ್ ಹಳೆಕೋಟೆ, ಎಂ.ಸಿ.ಹೂವಪ್ಪ, ರವಿ ಮಗ್ಗಲಮಕ್ಕಿ, ಜಿ.ಎಂ.ಪ್ರಸನ್ನ, ಉತ್ತಮ್ ಹಂತೂರು, ಸುರೇಂದ್ರ ಹ್ಯಾರಗುಡ್ಡೆ, ಧನಿಕ್ ಕೋಡದಿಣ್ಣೆ ಉಪಸ್ಥಿತರಿದ್ದರು.
ವರದಿ .ಕಿರಣ್ ಬೆಟ್ಟಗೆರೆ .ಸಂಪಾದಕರು


