ಮೂಡಿಗೆರೆ, ಡಿ.೨೪:
ಜಿಲ್ಲೆಯಲ್ಲಿ ಬಂಗ್ಲಾ ನುಸುಳುಕೋರರಿಂದ ಕಾನೂನು ಬಾಹೀರವಾದ
ಅಕ್ರಮ ಚಟುವಟಿಕೆಗಳು ಹೆಚ್ಚಾಗಿ ನಡೆಯುತ್ತಿದೆ. ಈ ಬಗ್ಗೆ ಜಿಲ್ಲಾಡಳಿತ
ಕ್ರಮ ವಹಿಸಬೇಕೆಂದು ವಿಶ್ವ ಹಿಂದೂ ಪರಿಷತ್ ತಾಲೂಕು ಅಧ್ಯಕ್ಷ ಸುದೇವ್
ಗುತ್ತಿ ಒತ್ತಾಯಿಸಿದರು
.
ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಬಾಂಗ್ಲಾ
ವಲಸಿಗರ ಸಂಖ್ಯೆ ಅಧಿಕವಾಗಿದೆ. ಇಲ್ಲಿನ ಕಾನೂನಿಗೆ ಬೆಲೆ ಕೊಡದೇ ಅಕ್ರಮ
ಚಟುವಟಿಕೆ ಹೆಚ್ಚಾಗಿ ನಡೆಸುತ್ತಿದ್ದಾರೆ. ಬಾಂಗ್ಲಾದವರಿAದ ಯಾವುದೇ ಅಹಿತಕರ
ಘಟನೆಗಳು ಸಂಭವಿಸಿದರೂ, ವಿಳಾಸವಿಲ್ಲದ ಕಾರಣ ಪೊಲೀಸರು ಪ್ರಕರಣ
ದಾಖಲಿಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಜಿಲ್ಲಾಡಳಿತ ಸಂಪೂರ್ಣ ನಿಷ್ಕಿçಯೆಗೊಂಡಿದೆ.
ಈಗಾಗಲೇ ಕಾಫಿ ತೋಟಕ್ಕೆ ಕಾರ್ಮಿಕರ ಕೊರತೆಯಿಂದಾಗಿ ತೋಟದ ಮಾಲೀಕರು
ಬಾಂಗ್ಲಾ ವಲಸಿಗರ ಮೊರೆ ಹೋಗುತ್ತಿದ್ದಾರೆ. ಅಲ್ಲದೇ ಅವರಿಗೆ ಆಧಾರ್ ಕಾರ್ಡ್
ಸೇರಿದಂತೆ ಇತರೇ ಮೂಲ ಸೌಕರ್ಯ ಒದಗಿಸುತ್ತಿದ್ದಾರೆ. ತೋಟದ ಮಾಲೀಕರಿಂದ
ನೆಲೆ ಪಡೆದುಕೊಂಡಿರುವ ಬಾಂಗ್ಲಾದವರಿAದ ಯಾವುದೇ ಅಹಿತಕರ ಘಟನೆ
ನಡೆದರೆ, ಮೊದಲು ತೋಟದ ಮಾಲೀಕರನ್ನೇ ಆರೋಪಿಯನ್ನಾಗಿ
ಮಾಡಬೇಕೆಂದು ಆಗ್ರಹಿಸಿದರು.
ಬಾಂಗ್ಲದಲ್ಲಿ ಹಿಂದೂ ಯುವಕ ದೀಪು ಚಂದ್ರದಾಸ್ ಹತ್ಯೆ ನಡೆಸಿರುವುದು
ಖಂಡನೀಯ. ಅಸ್ಸಾಂ ಮುಖ್ಯಮಂತ್ರಿ ಕೂಡ ಬಾಂಗ್ಲಾ ನುಸುಳುಕೋರರ ಬಗ್ಗೆ
ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಬಾಂಗ್ಲಾದವರು
ತೋಟದಲ್ಲಿ ಕೆಲಸ ಮಾಡುವ ಜತೆಗೆ ವಾರದ ಸಂತೆಯಲ್ಲಿ ವ್ಯಾಪಾರ ವಹಿವಾಟು
ಪ್ರಾರಂಭಿಸಿದ್ದಾರೆ. ಅಲ್ಲದೇ ಮದುವೆಯಾದ ಅಪ್ರಾಪ್ತ ಬಾಲಕೀಯರು
ಗರ್ಭಿಣಿಯಾಗುತ್ತಿರುವುದು ಕಂಡು ಬರುತ್ತಿದೆ. ಅವರಿಗೆ ಆಸ್ಪತ್ರೆಯಲ್ಲಿ
ಹೆರಿಗೆಯಾದ ಬಳಿಕ ಜನನ ಪ್ರಮಾಣ ಪತ್ರ ಪಡೆದು, ಇಲ್ಲಿನ ಮೂಲ
ದಾಖಲೆಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ. ಇದು ಮುಂದಿನ ದಿನದಲ್ಲಿ ಅಪಾಯ
ತರುವ ಮುನ್ಸೂಚನೆಯಾಗಿದೆ. ಹಾಗಾಗಿ ಇನ್ನು ಒಂದು ವಾರದಲ್ಲಿ ನಮ್ಮ
ದೇಶದ ಮೂಲನಿವಾಸಿಗಳ ಭದ್ರತೆಗೆ ಜಿಲ್ಲಾಡಳಿತ ಮತ್ತು ಸರಕಾರ ಕ್ರಮ
ವಹಿಸಿ, ಬಾಂಗ್ಲಾ ನಿವಾಸಿಗಳನ್ನು ಮೂಲ ಸ್ಥಾನಕ್ಕೆ ಸ್ಥಳಾಂತರಿಸಬೇಕು. ಇಲ್ಲವಾದರೆ
ತಾವೇ ಬಾಂಗ್ಲಾ ನಿವಾಸಿಗಳನ್ನು ಓಡಿಸಲು ಮುಂದಾಗಬೇಕಾಗುತ್ತದೆ ಎಂದು
ಎಚ್ಚರಿಕೆ ನೀಡಿದರು.
ಕಾರ್ಯದರ್ಶಿ ಪ್ರಶಾಂತ್ ಹಂಡುಗುಳಿ, ಸಂತೋಷ್ ಜನ್ನಾಪುರ, ಅಭಿಲಾಷ್
ಉಪಸ್ಥಿತರಿದ್ದರು.


